Devare Agadha


.

ಗೀತೆ: ದೇವರೇ ಅಗಾಧ (ಯೂಟ್ಯೂಬ್ನಲ್ಲಿ ಕೇಳಿ)
ಚಿತ್ರ: ಡೈರೆಕ್ಟರ್ಸ್ ಸ್ಪೆಷಲ್
ನಿರ್ದೇಶಕರು: ಗುರುಪ್ರಸಾದ್
ಸಂಗೀತ: ಅನೂಪ್ ಸೀಳಿನ್
ಹಾಡಿದವರು: ರಾಜೇಶ್ ಕೃಷ್ಣನ್

*

ದೇವರೇ ಅಗಾಧ ನಿನ್ನ ಮಹಿಮೆಯಾ ಕಡಲೂ
ದೇವರೇ ಅಗಾಧ ನಿನ್ನ ಮಹಿಮೆಯಾ ಕಡಲೂ

ಹೇಗೆ ಸಾಧ್ಯವೋ ಆದರ ಆಳವಳೆಯಲೂ
ದೇವರೇ ಅಗಾಧ ನಿನ್ನ ಮಹಿಮೆಯಾ ಕಡಲೂ

ತೋಳಕ್ಕೆಂದು ಕುರಿಯ ಕೊಟ್ಟೆ, ಸಿಂಹಕೆಂದು ಜಿಂಕೆಯಿಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ಅಗಾಧ ಅಗಾಧ ಅಗಾಧ ನಿನ್ನ ಮಹಿಮೆಯಾ ಕಡಲು

ತುಳಿತಕೆ ನೀ ತಿಮಿರು ಕೊಟ್ಟೆ, ದುಡಿತಕೇ ನೀ ಬೆವರು ಕೊಟ್ಟೆ
ಕವಿಗೆ ನೀನು ಧಮರು ಕೊಟ್ಟೆ ಬಡಿದು ದಣಿಯಲು
ದೇವರೇ ಅಗಾಧ ನಿನ್ನ ಮಹಿಮೆಯಾ ಕಡಲೂ

ನರನಿಗೆಂದೇ ನೀ ನಗೆಯ ಕೊಟ್ಟೆ
ನಗೆಯೊಳೂ ಹಲ ಬಗೆಯನಿಟ್ಟೆ
ನೂರು ನೋವಾ ಬಿಟ್ಟೆ ಒಂದು ನಗೆಯ ಕಾಣಲು

ಏರಲೊಂದು ಏಣಿ ಕೊಟ್ಟೆ, ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಕೊಟ್ಟೆ ಹೊಂಚಿ ಕೆಡವಲು
ದೇವರೇ ಅಗಾಧ ನಿನ್ನ ಮಹಿಮೆಯಾ ಕಡಲೂ

ಕಯ್ಯ ಕೊಟ್ಟೆ ಕೆಡವಲೆಂದು, ಕಾಲು ಕೊಟ್ಟೆ ಎಡವಲೆಂದು
ಬುದ್ಧಿ ಕೊಟ್ಟೆ ನಿನ್ನನ್ನೆ ಅಲ್ಲಗಳೆಯಲು
ವಿಶೇಷ ವಿಶೇಷ ನಿನ್ನ ಮಹಿಮೆಯಾ ಕಡಲೂ

ದೇವರೇ ಅಗಾಧ ನಿನ್ನ ಮಹಿಮೆಯಾ ಕಡಲೂ

ಹೇಗೆ ಸಾಧ್ಯವೋ ಆದರ ಆಳವಳೆಯಲೂ
ದೇವರೇ ಅಗಾಧ ನಿನ್ನ ಮಹಿಮೆಯಾ ಕಡಲೂ


16 Jun 2013 03:27

Comments: 0
Unless otherwise stated, the content of this page is licensed under Creative Commons Attribution-NonCommercial-NoDerivs 3.0 License